Tue. Oct 27th, 2020

Bangalore Galli

The News You Can Trust

ವರನಟ ಡಾ ರಾಜ್ ಕುಮಾರ್ ಅಭಿನಯಿಸಿದ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ವಿಶೇಷತೆ ಏನು ಗೊತ್ತೇ…ಓದಿ

1 min read
580 Views

ಪುರಂದರದಾಸರ ಕೀತ೯ನೆಯ ಸಾಲನ್ನೇ ಶೀಷಿ೯ಕೆಯಾಗಿಟ್ಟುಕೊಂಡು ಸಾಮಾನ್ಯ ಜನರ ಬದುಕು-ಬವಣೆಯನ್ನು ಹಾಸ್ಯದ ಲೇಪನದೊಂದಿಗೆ ತೆರೆ ಕಂಡ ವರನಟರ ಮತ್ತೊಂದು ಚಿತ್ರ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಅಣ್ಣಾವ್ರ ಚಿತ್ರಗಳು ಅಂದರೇ ಸಕುಟುಂಬ ಸಪರಿವಾರ ಸಮೇತರಾಗಿ ನೋಡ ಬನ್ನಿ ಎನ್ನುವ ಆಮಂತ್ರಣ ಪತ್ರಿಕೆ ಇದ್ದಂತೆ.

ವರನಟರಮಹಿಳಾ ಅಭಿಮಾನಿಗಳು ಇಂದಿಗೂ ಈ ಚಿತ್ರವನ್ನು ನೆನಪು ಮಾಡಿಕೊಂಡು ಕ್ಷಣಕಾಲ 1986ರ ಕಾಲ ಘಟ್ಟದತ್ತ ಮನ ಹರಿಸುತ್ತಾರೆ. ಸಿಂಗೀತಂ ಶ್ರೀನಿವಾಸ ರಾವ್ ಅವರ ಸಂಗೀತ ಹಾಗೂ ನಿದೇ೯ಶನ ಇದ್ದ ಈ ಚಿತ್ರ ಪಕ್ಕದ ಆಂಧ್ರದ ಹೈದ್ರಾಬಾದಿನಲ್ಲೂ ಬಿಡುಗಡೆಗೊಂಡಿತ್ತಲ್ಲದೆ ಕನಾ೯ಟಕದ ಹಲವು ಚಿತ್ರಮಂದಿರಗಳಲ್ಲಿ ಶತ ದಿನ ಕಂಡಿತ್ತು

ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ 26 ವಾರಗಳ ಪ್ರದಶ೯ನ ಕಂಡು ಅತ್ಯುತ್ತಮ ನಟ ಅತ್ಯುತ್ತಮ ಚಿತ್ರ ಎಂದು ರಾಜ್ಯ ಪ್ರಶಸ್ತಿ ಪಡೆದಿತ್ತು. ಒಂದೆಡೆ ನಿರುದ್ಯೋಗ ಮತ್ತೊಂದೆಡೆ ಒಡಹುಟ್ಟಿದವಳ ಸಂಸಾರ ತಾಪತ್ರಯ.ಇಂತಹ

ಸಾಮಾಜಿಕ ಪಿಡುಗುಗಳನ್ನು ಎದುರಿಸುವ ಯುವಕ ಪಾಂಡುರಂಗ ಪಾತ್ರದಲ್ಲಿ ಅಣ್ಣಾವ್ರ ಅಭಿನಯಕ್ಕೆ ಸರಿಸಾಟಿ ಯಾರೂ ಇಲ್ಲ.ತರ್ಲೆ ತಮ್ಮಯ್ಯ ಪಾತ್ರವಾಗಿ ನಟಿಸಿದ ಬಾಲಕೃಷ್ಣ ಚಿತ್ರದುದ್ಧಕ್ಕೂ ಪೇಚಿಗೆ ಸಿಲುಕಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಚಿತ್ರದ ಪ್ರಾರಂಭದಲ್ಲೇ ವ್ಯಂಗ್ಯ ಚಿತ್ರಗಳಿಂದ ಕೂಡಿದ ಶೀಷಿ೯ಕೆ ಗೀತೆ ಬಡವ-ಬಲ್ಲಿದರ ಅಂತರವನ್ನು ತೋರಿಸುತ್ತದಲ್ಲದೇ, 33 ವಷ೯ಗಳೇ ಕಳೆದರೂ ಈ ಗೀತೆ ಇಂದಿಗೂ ಪ್ರಸ್ತುತ ಎನಿಸಿದೆ..

Leave a Reply

Your email address will not be published. Required fields are marked *

Categories

You may have missed

RSS
Follow by Email
Facebook
Twitter
error: Content is protected !!