Sun. Oct 25th, 2020

Bangalore Galli

The News You Can Trust

ಬಾಯಲ್ಲಿಟ್ಟರೆ ಕರಗುವ ರಸಗುಲ್ಲ ಮಾಡೋದು ಹೇಗೆ ಗೊತ್ತಾ…ಓದಿ ನಿಮ್ಮ ಮನೆಯಲ್ಲೂ ಮಾಡಿರಿ

1 min read
158 Views

ಬೇಕಾಗುವ ಸಾಮಗ್ರಿ

*****************

ಹಾಲು – 1 ಲೀಟರ್

ನಿಂಬೆ ಹಣ್ಣು – 1

ಸಕ್ಕರೆ — 2 ಕಪ್

ರೋಜ್ ವಾಟರ್

ಮಾಡುವ ವಿಧಾನ –

***************

credit: third party image reference

ಒಂದು ಲೀಟರ್ ಹಾಲನ್ನು(ಗಟ್ಟಿ ಹಾಲು) ಕಾಯಲಿಕ್ಕಿಡಿ. ಚೆನ್ನಾಗಿ ಕಾದು ಒಂದು ಕುದಿ ಬರುವಾ nimಬೆಹಣ್ಣಿನ ರಸ ಹಾಕಿ ಚೆನ್ನಾಗಿ ಕಲಕಿ. ಚೆನ್ನಾಗಿ ಮಿಕ್ಷ್ ಆದಾಗ ಹಾಲು ಒಡೆದು ಪನೀರ್ ತರಹ ಆಗತ್ತೆ. ಒಂದು ಬಿಳಿಬಟ್ಟೆಯಲ್ಲಿ ಹಾಕಿ ಸೋರಲು ಬಿಡಿ. ಒಂದು ತೊಟ್ಟು ನೀರಿರಬಾರದು ಹಾಗೆ ನೀಟಾಗಿ ಡ್ರೈ ಆಗಬೇಕು.

credit: third party image reference

ಹಾಲನ್ನು ಸೋರಲು ಬಿಟ್ಟು ಸಕ್ಕರೆಗೆ ನೀರು ಹಾಕಿ

ತೆಳು ಪಾಕ ಆಗುವಂತೆ ಕಾಯಿಸಿ. ನಂತರ ಸೋಸಿದ ಪನೀರನ್ನು ಒಂದು ತಟ್ಟೆಯಲ್ಲಿ ಹಾಕಿ ಅಂಗೈಯಿಂದ ಉಜ್ಜಿ ಚೆನ್ನಾಗಿ ಕಲಸಿ. ನೀಟಾಗಿ ಒಡಕು ಬರದಂತೆ ಚಿಕ್ಕ, ಚಿಕ್ಕ ಉಂಡೆಗಳನ್ನು ಮಾಡಿ ಕಾಯುತ್ತಿರುವ ಸಕ್ಕರೆ ಪಾಕಕ್ಕೆ ಹಾಕಿ ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ ಒಂದು ಹತ್ತು ನಿಮಿಷ ಬೇಯಲು ಬಿಡಿ.

credit: third party image reference

ನಂತರ ಇಳಿಸಿ ಒಂದೆರಡು ತೊಟ್ಟು ರೋಸ್ ವಾಟರ್ ಅಥವಾ ರೋಸ್ ಎಸೆನ್ಸ್ ಹಾಕಿ. ಆರಿದ ನಂತರ ತಿನ್ನಲು ಕೊಡಿ.

ಫ್ರಿಡ್ಜ್ ಅಲ್ಲಿಟ್ಟು ತಿನ್ನಬಹುದು. (ಸಕ್ಕರೆ ನಿಮಗೆಷ್ಟು ಸಿಹಿ ಬೇಕೋ ಅಷ್ಟು ಹಾಕಿಕೊಳ್ಳಬಹುದು. ಆದರೆ ತೆಳುಪಾಕದಲ್ಲಿ ಬೇಯಬೇಕು. ಪುಟ್ಟ ಉಂಡೆಗಳಾದರೆ ಒಳ್ಳೆಯದು. ಸಕ್ಕರೆ ಪಾಕ ಹೀರಿಕೊಂಡು ಸಖತ್ತಾಗಿರತ್ತೆ.

Leave a Reply

Your email address will not be published. Required fields are marked *

Categories

You may have missed

RSS
Follow by Email
Facebook
Twitter
error: Content is protected !!