Sun. Oct 25th, 2020

Bangalore Galli

The News You Can Trust

ದೇಹಕ್ಕೆ ಎನರ್ಜಿಯನ್ನು ಕೊಡುವುದರ ಜೊತೆಗೆ ದೇಹವನ್ನು ಗಟ್ಟಿಮುಟ್ಟಾಗಿರುವಂತೆ ಮಾಡುವ ಸಬ್ಬಕ್ಕಿ, ಇದನ್ನು ಬಳಸೋದು ಹೇಗೆ ಗೋತ್ತಾ.?!

1 min read
346 Views

ಮನುಷ್ಯ ಉತ್ತಮ ಆರೋಗ್ಯವಂತನಾಗಿರಲು ಹಾಗು ಶಕ್ತಿಶಾಲಿಯಾಗಲು ಹಲವು ಕಸರತ್ತನ್ನು ಮಾಡುತ್ತಾನೆ. ದೇಹಕ್ಕೆ ಉತ್ತಮ ಎನರ್ಜಿ ಇದ್ರೆ ಎಂತಹ ಕೆಲಸವನ್ನು ಕೂಡ ಮಾಡಬಲ್ಲ. ದೇಹವನ್ನು ಗಟ್ಟಿಮುಟ್ಟಾಗಿರುವಂತೆ, ಹಾಗು ಎನರ್ಜಿಯನ್ನು ಸಬ್ಬಕ್ಕಿ ಒದಗಿಸಬಲ್ಲದು ಅದು ಹೇಗೆ ಅನ್ನೋದನ್ನ ಮುಂದೆ ನೋಡಿ..

ಜಿಮ್ ಮಾಡುವವರಿಗೆ ಹಾಗು ಮಾಡದೇ ಇರುವವರಿಗೆ ಸಬ್ಬಕ್ಕಿ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗು ದೇಹಕ್ಕೆ ಎನರ್ಜಿಯನ್ನು ಒದಗಿಸಿಕೊಡುತ್ತದೆ. ದೇವನ್ನು ಗಟ್ಟಿಮುಟ್ಟಾಗಿ ಮಾಡಿಕೊಳ್ಳಲು ಹಾಗು ಎನರ್ಜಿಯನ್ನು ಪಡೆಯಲು ಪ್ರತಿಯೊಬ್ಬರಿಗೂ ಅಸೆ ಇದ್ದೆ ಇರುತ್ತದೆ.

ಕೆಲಸದ ಒತ್ತಡದಿಂದ ದೇಹಕ್ಕೆ ವರ್ಕೌಟ್ ಮಾಡಲು ಆಗುವುದಿಲ್ಲ, ಹಾಗಾಗಿ ದಿನಕ್ಕೆ ಒಂದು ಬಾರಿಯಾದರೂ ಸಬ್ಬಕ್ಕಿಯನ್ನು ಹಾಲಿನೊಂದಿಗೆ ಸಬ್ಬಕ್ಕಿ ಕಿರ್, ಸಬ್ಬಕ್ಕಿ ಪಾಯಸದ ರೀತಿಯಲ್ಲಿ ತಯಾರಿಸಿ ಸೇವನೆಮಾಡುವುದರಿಂದ ಸಬ್ಬಕ್ಕಿಯಲ್ಲಿರುವ ಪ್ರೊಟೀನ್ ಹಾಗು ಪೋಷಕಾಂಶಗಳು ದೇಹಕ್ಕೆ ಉತ್ತಮ ಎನರ್ಜಿಯನ್ನು ನೀಡುತ್ತದೆ.

ಸಬ್ಬಕ್ಕಿಯಲ್ಲಿರುವ ಆರೋಗ್ಯಕಾರಿ ಅಂಶಗಳು:

ಸಬ್ಬಕ್ಕಿಯಲ್ಲಿ ಐರನ್‌, ಕ್ಯಾಲ್ಶಿಯಂ, ಪ್ರೋಟಿನ್‌ ಮತ್ತು ವಿಟಮಿನ್‌, ಮಿನರಲ್ಸ್‌ ಅಧಿಕ ಪ್ರಮಾಣದಲ್ಲಿ ಇರುತ್ತವೆ. ಹಾಗಾಗಿ ಸಬ್ಬಕ್ಕಿ ಉತ್ತಮ ಆರೋಗ್ಯವನ್ನುವೃದ್ಧಿಸುತ್ತದೆ.

ದೇಹಕ್ಕೆ ಬಲಿಷ್ಠವಾದ ಸ್ನಾಯುಗಳನ್ನು ಹೊಂದಲು ಸಬ್ಬಕ್ಕಿ ಸಹಕಾರಿಯಾಗಿದೆ, ಸಬ್ಬಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಇದೆ. ಇದರಿಂದ ಮಾಂಸಖಂಡಗಳು ಹೆಚ್ಚು ಸದೃಢವಾಗುತ್ತವೆ.

ದೇಹದ ಎಲುಬುಗಳಿಗೆ ಸಬ್ಬಕ್ಕಿ ಹೆಚ್ಚು ಸಹಕಾರಿ, ಸಬ್ಬಕ್ಕಿಯಲ್ಲಿ ವಿಟಮಿನ್‌ ಕೆ ಮತ್ತು ಕ್ಯಾಲ್ಶಿಯಂ ಇರುವುದರಿಂದ ಮೂಳೆಗಳು ಸದೃಢವಾಗಿರಲು ಸಹಾಯ ಮಾಡುತ್ತವೆ.

ಸಬ್ಬಕ್ಕಿ ರಕ್ತ ಹೀನತೆಯನ್ನು ನಿವಾರಿಸುತ್ತದೆ ಹಾಗು ರಕದೊತ್ತಡವನ್ನು ನಿಯಂತ್ರಿಸುತ್ತದೆ ಹಾಗಾಗಿ ಬೆಳಗಿನ ಉಪಾಹಾರದಲ್ಲಿ ಸಬ್ಬಕ್ಕಿ ಬಳಸಿದ ಆಹಾರವನ್ನು ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಇದರಿಂದ ಎನರ್ಜಿಯನ್ನು ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

Categories

You may have missed

RSS
Follow by Email
Facebook
Twitter
error: Content is protected !!