Wed. Oct 28th, 2020

Bangalore Galli

The News You Can Trust

ಸಾವಿನ ಮನೆಯಲ್ಲಿ ಕರೀನಾ ಕಪೂರ್ ಮಾಡಿದ್ದೇನು ಗೊತ್ತೇ..ನೆಟ್ಟಿಗರಿಂದ ಟ್ರೋಲ್

1 min read
237 Views
ಪ್ರಸಿದ್ಧ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ತಂದೆ ಅನಾರೋಗ್ಯದ ಕಾರಣದಿಂದ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಮೃತರಿಗೆ ಸಂತಾಪ ಸೂಚಿಸಲು ಚಿತ್ರಂಗದ ಅನೇಕ ಗಣ್ಯರು ಮನೀಶ್ ಮನೆಗೆ ಆಗಮಿಸಿದ್ದು, ಇದರ ಫೋಟೋ ಮತ್ತು ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

ಆದರೆ, ನಟಿ ಕರೀನಾ ಕಪೂರ್ ಖಾನ್ ಸಹೋದರಿ ಕರಿಷ್ಮಾ ಕಪೂರ್ ಅವರೊಂದಿಗೆ ಆಗಮಿಸಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟ್ರೋಲ್ ಆಗಿದೆ.

ಕಪೂರ್ ಸಹೋದರಿಯರು ಬಂದ ಬೆನ್ನಲ್ಲೇ ಜಯಾ ಬಚ್ಚನ್ ಮತ್ತು ಅವರ ಮಗಳು ಶ್ವೇತಾ ಬಚ್ಚನ್ ಆಗಮಿಸಿದ್ದು, ಅವರು ಮನೆಯೊಳಗೆ ಹೋಗುವಾಗ ಹೊರಬರುತ್ತಿದ್ದ ಕರೀನಾ ಕಪೂರ್ ಎದುರಾಗಿದ್ದಾರೆ. ಜಯಾ ಬಚ್ಚನ್ ಅವರನ್ನು ಕಂಡಾಕ್ಷಣ ಕರೀನಾ ಕಪೂರ್ ನಗುವಿನೊಂದಿಗೆ ಅವರನ್ನು ಸ್ವಾಗತಿಸಿದ್ದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಾವಿನ ಮನೆಯಲ್ಲಿದ್ದಾಗ ಮುಖದಲ್ಲಿ ನಗು ಹರಿಸಿದ್ದಕ್ಕೆ ಕೆಲವರು ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನೂ ಕೆಲವರು ಕರೀನಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Categories

You may have missed

RSS
Follow by Email
Facebook
Twitter
error: Content is protected !!