Tue. Oct 27th, 2020

Bangalore Galli

The News You Can Trust

ಮದುವೆಯಲ್ಲಿ ಅರುಂಧತಿ ನಕ್ಷತ್ರ ತೋರಿಸುತ್ತಾರೆ ಯಾಕೇ ?

1 min read
428 Views
ಪುರಾತನ ಕಾಲದಲ್ಲಿ ಬಹುತೇಕ ಮದುವೆಗಳು ಬ್ರಹ್ಮ ಮೂರ್ತ ದಲ್ಲಿ ನೆರವೇರುತ್ತಿತ್ತು. ಸುಮಾರು 4.30 ಸಮಯದಲ್ಲಿ ನವದಂಪತಿಗಳಿಗೆ, ಸಪ್ತರ್ಷಿ ಮಂಡಲದ ವಸಿಷ್ಠ ಅರುಂಧತಿ ನಕ್ಷತ್ರಗಳ ದರ್ಶನ ಮಾಡುತ್ತಿದ್ದರು. ಒಂದು ಕೆಂದ್ರಿತ ಬಿಂದುವಿನ ಸುತ್ತಲೂ ಸುತ್ತುವ ಜೋಡಿ ನಕ್ಷತ್ರಗಳು.

ಶ್ರೀರಾಮನ ಗುರುಗಳಾದ ವಸಿಷ್ಠರು, ಅವರನ್ನೇ ಸರ್ವಸ್ವ ಎಂದು ಆರಾಧಿಸುತ್ತಿದ್ದ ಅವರ ಪತ್ನಿ, ಅರುಂಧತಿ ಸಪ್ತರ್ಷಿಗಳಲ್ಲಿ ಮೇಲುಸ್ತರದಲ್ಲಿರುವ ನಂಬಿಕೆಯಿಂದ, ಅರುಂಧತಿ ನಕ್ಷತ್ರದ ದರ್ಶನದ ಪ್ರತೀತಿ ಪ್ರಾರಂಭವಾಯ್ತು.

ಈ ಸಪ್ತಋಷಿ ಮಂಡಲದಲ್ಲಿ ವಸಿಷ್ಠ ನಕ್ಷತ್ರದ, ಪಕ್ಕದಲ್ಲಿ ಅರುಂಧತಿ ನಕ್ಷತ್ರ ಇರುತ್ತದೆ. ಅರುಂಧತಿ ಎಂಬುದು ವಸಿಷ್ಠ ಋಷಿಗಳ ಪತ್ನಿ ಹೆಸರು. ಈ ಎರಡು ನಕ್ಷತ್ರಗಳು ಸದಾ ಅಂಟಿಕೊಂಡಿರುವುದರಿಂದ, ಇವುಗಳನ್ನು ಉತ್ತಮ ಜೋಡಿಗಳು ಎಂದು ಪರಿಗಣಿಸಲಾಗುತ್ತದೆ. ಮದುವೆಯಾದ ನೂತನ ವಧು-ವರರಿಗೆ, ಸತ್ಯ, ನೀತಿ, ಪ್ರೀತಿ,ಸಹಬಾಳ್ವೆ ನಡೆಸಲಿ ಎಂಬ ಉದ್ದೇಶದಿಂದಲೇ, ತಾಳಿ ಶಾಸ್ತ್ರ ಮುಗಿದ ಮೇಲೆ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾರೆ.

ಸಪ್ತರ್ಷಿಮಂಡಲವನ್ನು ಇಂಗ್ಲಿಷ್ ನಲ್ಲಿ, ಬಿಗ್ ಡಿಪ್ಪರ್ ಎನ್ನುತ್ತಾರೆ . ಇದನ್ನು 1617 ರಲ್ಲಿ ಕಂಡುಹಿಡಿದ ಗ್ರೀಕ್ ಖಗೋಳ ತಜ್ಞರು ಗೆಲಲಿಯೋ. ಆದರೆ ಭಾರತದಲ್ಲಿ ಮಹಾಭಾರತದ ಕಾಲದಲ್ಲಿ ನಡೆದ ಮದುವೆಗಳಲ್ಲಿ , ಸುಮಾರು ಏಳು ಸಾವಿರ ವರ್ಷಕ್ಕೂ ಹಿಂದೆ, ನಡೆಯುತ್ತಿದ್ದ ಮದುವೆಗಳಲ್ಲಿ ಅರುಂಧತಿ ದರ್ಶನದ ಆಚರಣೆ ಇತ್ತು.

ಯಾವ ಬೈನಾಕುಲರ್ಲರಿಯ ಸಹಾಯವಿಲ್ಲದೆ ಅಂದಿನ ಜನಗಳಿಗೆ ಇದೊಂದು ಸಾಮಾನ್ಯ ಜ್ಞಾನದಂತೆ ಕಂಡುಬಂದಿತ್ತು.

Leave a Reply

Your email address will not be published. Required fields are marked *

Categories

You may have missed

RSS
Follow by Email
Facebook
Twitter
error: Content is protected !!